Tuesday, March 27, 2007

Mysooru Mallighe Nataka

ಶನಿವಾರ ರಂಗ ಶಂಕರದಲ್ಲಿ ಮೈಸೂರು ಮಲ್ಲಿಗೆ ನಾಟಕ ನೋಡುವ ಅವಕಾಶ ಒದಗಿಬಂದಿತು. ಕವಿಯು ಕಾವ್ಯಗಳಲ್ಲಿ ವ್ಯಕ್ತ ಪಡಿಸಿರುವ ರಸಿಕತೆ, ಬೇಸರ, ದುಕ್ಕ, ದುಮ್ಮಾನ - ಎಲ್ಲವನ್ನು ನಾಟಕದಲ್ಲಿ ಹಾಡುಗಳಾಗಿ, ಸಮಯೋಚಿತವಾಗಿ ಅಳವಡಿಸಿಕೊಂಡು ಕವಿಯ ನಿಜ ಜೀವನವನ್ಣ ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದಾರೆ. ಚಿರಪರಿಚಿತವಾದ ಮೈಸೂರು ಮಲ್ಲಿಗೆ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾದಿ ನಾಟಕಕ್ಕೆ ಜೀವ ತಂದಿರುವುದು ಬಹಳ ವಿಶೇಷ. ಕಾವ್ಯ ಜಗತ್ತಿನಲ್ಲಿ ವಿಜೃಂಬಿಸಿದ ಕವಿ ವ್ಯವಹಾರಿಕ ಜಗತ್ತಿನ ಹಾವ-ಭಾವ ,ಒಳ ಸೂಲಿಗಳನ್ನು ಅರಿಯದೇ ಸಂಸಾರದ ನೋಗವನ್ನು ಹೊರಲು ಸಾಕಸ್ತು ಶ್ರಮ ಪಡಬೇಕಾಗಿ ಬಂದುದು ವಿಷಾದಕರ. ಅದರಲ್ಲೂ ತಮ್ಮ ಜೀವನದ ಕೊನೆ ಘಳಿಗೆಯಲ್ಲಿ ತಮ್ಮ ಕವನಮಾಲೆಯನ್ನು ಮಾರಬೇಕಾಗಿ ಬಂದ ಸಂಧರ್ಬವನ್ನು ಮನ ಕಾಲುಕುವಂತೆ ನಟಿಸಲಾಗಿದೆ. ಕವಿಯ ನಿಜಜೀವನವನ್ನು ಅವರದೇ ಕಾವ್ಯಗಳ ಮೂಲಕ ಪ್ರದರ್ಶಿಸಿ ಜನಗಳ ಮನ ಸೆಳೆಯುವ ಕಲಾ ಗಂಗೋತ್ರಿ ತಂಡದ ಈ ಪ್ರಯತ್ನ ಶ್ಲಾಗಣೀಯ. ಅವಕಾಶ ಸಿಕ್ಕಲ್ಲಿ ಎಲ್ಲರೂ ಇದನ್ನು ನೋಡಿ ಸವಿಯಾಲಿ ಅನ್ನುವುದು ನನ್ನ ಅಭಿಪ್ರಾಯ

1 Comments:

Blogger Swetha said...

tumbha kushi aguthe kannada dalli barediruvudannu nodira :-)

3:23 PM  

Post a Comment

<< Home